ಕೊಪ್ಪಳ ಹತ್ತಿರದ ಭಾಗ್ಯನಗರದಲ್ಲಿ ಜಿಂಕೆ ಮಾಂಸ ಮಾರುತ್ತಿದ್ದವನನ್ನು ಜಿಂಕೆ ಚರ್ಮ ಸಮೇತ ಅರಣ್ಯ ಅಧಿಕಾರಿಗಳ ತಂಡ ಶುಕ್ರವಾರ ಅರೆಸ್ಟ್ ಮಾಡಿದೆ.
ಅರೆಸ್ಟ್ ಆದವನು 55 ವರ್ಷದ ಕಿನ್ನಾಳ ಗ್ರಾಮದ ಗ್ಯಾನಪ್ಪ ರಾಮಣ್ಣ.
ಕೊಪ್ಪಳದ ಕಿನ್ನಾಳ ರಸ್ತೆಯ ಭಾಗ್ಯನಗರ ಕ್ರಾಸ್ ನಿಂದ ಭಾಗ್ಯನಗರದೊಳಗೆ ಹೋಗುವ ರಸ್ತೆಯ ಸಾಮಿಲ್ ಹತ್ತಿರ ಎಕ್ಸ್ ಎಲ್ ಸುಪರ್ ವಾಹನದಲ್ಲಿ ಮಾಂಸ್ ಚರ್ಮ ಒಯ್ಯತ್ತಿದ್ದ ಗ್ಯಾನಪ್ಪನಿಂದ 8.5 ಕೆ.ಜಿ ಜಿಂಕೆ ಮಾಂಸ ಮತ್ತು 5 ಜಿಂಕೆ ಚರ್ಮ ವಶಪಡಿಸಿಕೊಂಡಿದ್ದಾರೆ.
ಆರೋಪಿ ಗ್ಯಾನಪ್ಪ 250-300 ರೂ.ಗೆ ಕೆ.ಜಿ.ಯಂತೆ ಜಿಂಕೆ ಮಾಂಸ ಮಾರಾಟ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.
ದಾಳಿ ನೇತೃತ್ವವನ್ನು ಮುನಿರಾಬಾದ್ ವಲಯ ಅರಣ್ಯಾಧಿಕಾರಿ ಪ್ರಕಾಶ ಪವಾಡಿಗೌಡರ್, ಕೊಪ್ಪಳ ಪ್ರಭಾರಿ ಉಪವಲಯ ಅರಣ್ಯಾಧಿಕಾರಿ ರಾಜೇಸಾಬ ರಾಟಿ ನೇತೃತ್ವದಲ್ಲಿ ಫಾರೆಸ್ಟ್ ಗಾರ್ಡ್ ವೀರಪ್ಪ ಸೇರಿದಂತೆ ಅರಣ್ಯ ಇಲಾಖೆ ಸಿಬ್ಬಂದಿ ದಾಳಿ ನಡೆಸಿ ಮಾಂಸ ಮತ್ತು ಜಿಂಕೆ ಚರ್ಮ ಮಾರಾಟ ಪ್ರಕರಣ ಪತ್ತೆ ಹಚ್ಚಿದ್ದಾರೆ.
ಉಪವಲಯ ಅರಣ್ಯಾಧಿಕಾರಿಗಳಾದ ಮಹಾಂತಯ್ಯ , ನಾಗರಾಜಗೌಡ, ದೊಡ್ಡೇಶ, ಯಲಬುರ್ಗಾ ಶಾಖೆಯ ಶರೀಫ್ ಕೊತ್ವಾಲ್ ಉಪಸ್ಥಿತರಿದ್ದರು.
ಆರೋಪಿ ಗ್ಯಾನಪ್ಪ ಬಂಧಿಸಿರುವ ಅರಣ್ಯಾಧಿಕಾರಿಗಳು ಮುಂದಿನ ಕ್ರಮ ಜರುಗಿಸಿದ್ದಾರೆ.