ಕೊಪ್ಪಳ : ರೈಲು ಹಳಿಯ ಮೇಲೆ ಕುಡಿದು ಚಿತ್ತಾಗಿ ರೈಲಿಗೆ ಸಿಲುಕಿ ಮೂವರು ಯುವಕರು ಪ್ರಾಣ ಕಳೆದುಕೊಂಡಿದ್ದಾರೆ.
ಈ ದುರ್ಘಟನೆ ಗುರುವಾರ ರಾತ್ರಿ ಗಂಗಾವತಿಯಲ್ಲಿ ನಡೆದಿದ್ದು ಹುಬ್ವಳ್ಳಿ - ಸಿಂಧನೂರು ರೈಲಿಗೆ ಸಿಲುಕಿ ಸಾವಿಗೀಡಾದ ಮೂವರನ್ನು ಮೌನೇಶ ಪತ್ತಾರ (23) , ಸುನೀಲ್ (23) , ಭಿಮನಾಯ್ಕ (20) ಎಂದು ಗುರುತಿಸಲಾಗಿದೆ.
ಗುರುವಾರ ರಾತ್ರಿ ರೇಲ್ವೆ ಟ್ರ್ಯಾಕ್ ಮೇಲೆ ಮದ್ಯ ಸೇವಿಸುತ್ತಾ ಕುಳಿತಿದ್ದ ಯುವಕರ ಮೇಲೆ ರೈಲು ಹೋಗಿದ್ದು
ಸ್ಥಳದಲ್ಲಿಯೇ ಮೂವರೂ ಯುವಕರು ಸಾವಿಗೀಡಾಗಿದ್ದಾರೆ. ಇಬ್ಬರು ದೇಹ ಅಲ್ಲಲ್ಲಿ ತುಂಡಾಗಿದೆ.
ಈ ಕುರಿತು ಗದಗ ರೇಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.