ಕೊಪ್ಪಳ : ನಗರ ಮತ್ತು ಗ್ರಾಮೀಣ ಪ್ರದೇಶದ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಆನ್ ಲೈನ್ ಮೂಲಕ ಸ್ಕಾಲರ್ಶಿಪ್ ಹಣ ತಲುಪಲು ಆಗಿದ್ದ ತಾಂತ್ರಿಕ ತೊಂದರೆಗಳನ್ನು ನಿವಾರಿಸಲು ಶುಕ್ರವಾರ MHPS ಶಾಲೆ ಆವರಣದ ಮೌಲಾನಾ ಆಜಾದ್ ಶಾಲೆಯಲ್ಲಿ ಕೌಂಟರ್ ತೆರೆಯಲಾಗಿತ್ತು.
ತಾಲೂಕಿನ 2023-24 ಸಾಲಿನ ಅಲ್ಪಸಂಖ್ಯಾತರ ಸುಮಾರು 350 ವಿದ್ಯಾರ್ಥಿಗಳ ಸ್ಕಾಲರ್ಶಿಪ್ ಹಣ ವಿದ್ಯಾರ್ಥಿಗಳ ಅಕೌಂಟ್ ಗೆ ಜಮಾ ಮಾಡಲು ವಿವಿಧ ತಾಂತ್ರಿಕ ತೊಂದರೆಗಳಿಂದ ಅಡಚಣೆ ಆಗಿತ್ತು.
ಸಮಸ್ಯೆ ನಿವಾರಿಸಲು ವಿದ್ಯಾರ್ಥಿಗಳ ಪಾಲಕರ ಸಮ್ಮುಖದಲ್ಲಿ ಅಂಚೆ ಕಚೇರಿ ಅಕೌಂಟ್ ತೆರೆಯಲು ವ್ಯವಸ್ಥೆ ಮಾಡಲಾಗಿತ್ತು.
ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಸಿಬ್ಬಂದಿ , ಅಂಚೆ ಇಲಾಖೆ ಸಿಬ್ಬಂದಿ ಕಾರ್ಯನಿರ್ವಹಿಸಿ ಹೊಸ ಅಕೌಂಟ್ ತೆರೆದದ್ದು ಸ್ಕಾಲರ್ಶಿಪ್ ಹಣ ಬರಲು ಸಹಾಯ ಮಾಡಿದಂತಾಗಿದೆ ಎಂದು ತಿಳಿಸಿದ ಮುಖಂಡ ಮುನೀರ್ ಸಿದ್ದಿಕಿ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳ ಸ್ಕಾಲರ್ಶಿಪ್ ವಿಷಯದಲ್ಲಿ ಕೆಲ ಖಾಸಗಿ ಶಾಲೆಗಳು ಸರಿಯಾಗಿ ಸಹಕರಿಸುವುದಿಲ್ಲ. ಇದು ನಿಲ್ಲಬೇಕು.ಇಲ್ಲವಾದರೆ ಅಲ್ಪಸಂಖ್ಯಾತರ ಯೋಜನೆ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ತಲುಪದಿದ್ದರೆ ಇಲಾಖೆಗೆ, ಸಚಿವರಿಗೆ ಕೆಟ್ಟ ಹೆಸರು ತಂದಂತಾಗುತ್ತದೆ ಎಂದು ಮುನೀರ್ ಸಿದ್ದಿಕಿ ತಿಳಿಸಿದ್ದಾರೆ.