ಕೊಪ್ಪಳ : ಶಾಸಕರ ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ (MHPS) ಮುಂದೆ ಹೈವೆಯಲ್ಲಿ ವಾಹನಗಳ ಪಾರ್ಕಿಂಗ್, ರಸ್ತೆಯಲ್ಲಿ ವ್ಯಾಪಾರದಿಂದ ಶಾಲೆಗೆ ಹೋಗಿ ಬರುವ ವಿದ್ಯಾರ್ಥಿಗಳ ಸುರಕ್ಷತೆ ಬಗ್ಗೆ ಪಾಲಕರಲ್ಲಿ ಆತಂಕ ಮೂಡಿಸಿದೆ.
MHPS ಶಾಲಾ ಆವರಣದಲ್ಲಿ ಮೌಲಾನಾ ಆಜಾದ್ ಶಾಲೆ ಕೂಡ ಇದ್ದು ಎರಡೂ ಶಾಲೆಗಳ ಸುಮಾರು 450-500 ವಿದ್ಯಾರ್ಥಿಗಳಿದ್ದಾರೆ.
MHPS ಶಾಲೆಯ ಮಳಿಗೆ ಮುಂದಿನ ಫುಟ್ ಪಾತ್ ಕೆಲವರು ಅತಿಕ್ರಮಿಸಿಕೊಂಡಿದ್ದು ಮುಂದಿರುವ ಹೈವೆಯಲ್ಲಿ ವ್ಯಾಪಾರ ಮಾಡುವುದು ಅದೇ ಹೈವೆಯಲ್ಲಿ ಟೂರಿಂಗ್ ಟ್ರಾವೆಲ್ ವಾಹನ ಪಾರ್ಕಿಂಗ್ ಮಾಡುವುದರಿಂದ ಬೆಳಗ್ಗೆ 9ರಿಂದ10 ಸಂಜೆ 4ರಿಂದ 5 ರವರೆಗೆ ವಿದ್ಯಾರ್ಥಿಗಳು ಶಾಲೆಗೆ ಹೋಗಿ ಬರಲು ಹೆದರುವಂತಾಗಿದೆ.
ಬೆಳಗ್ಗೆ 8 ರಿಂದ 11 ರವರೆಗೆ ಹೈವೆಯಲ್ಲಿ ಹೆಚ್ಚು ವಾಹನಗಳ ಸಂದಣಿ ಇರುತ್ತದೆ. ವಿಶೇಷವಾಗಿ ಹಳೆ ಜಿಲ್ಲಾಸ್ಪತ್ರೆ ಮುಂದಿನ ರಸ್ತೆಯಿಂದ ಬರುವ ವಿದ್ಯಾರ್ಥಿಗಳು ಹೈವೆ ದಾಟಿದರೆ ಶಾಲೆ ಮುಂದಿನ ಫುಟ್ ಪಾತ್ ಒತ್ತುವರಿ, ಹೈವೆ ನಲ್ಲಿ ಪಾರ್ಕಿಂಗ್ ನಿಂದ ಹೈವೆನಲ್ಲಿಯೇ ನಡೆದು ಶಾಲೆ ಕಂಪೌಂಡ್ ನಲ್ಲಿ ಕಾಲಿಡಬೇಕು.
ಈ ಗಂಭೀರ ಸಮಸ್ಯೆ ಬಗ್ಗೆ SDPI ಜಿಲ್ಲಾ ಸಮಿತಿ ಸದಸ್ಯ ಸಲಿಂ ಖಾದ್ರಿ ಹಾಗೂ ಸಂಗಡಿಗರು ಶಾಲೆಯ HM ಗೆ ಭೇಟಿ ಆಗಿ ಮಾತನಾಡಿದ್ದು HM ಏನು ಮಾಡುತ್ತಾರೊ ಕಾದು ನೋಡಬೇಕು.
ಶಾಲಾ ಅಧ್ಯಕ್ಷ ಶಾಸಕ ರಾಘವೇಂದ್ರ ಹಿಟ್ನಾಳ, ಬಿಇಒ , ಡಿಡಿಪಿಐ, ನಗರಸಭೆ, ಟ್ರಾಫಿಕ್ ಪೊಲೀಸ್ ಇತ್ತ ಗಮನಹರಿಸಿ ಸಮಸ್ಯೆ ಬಗೆಹರಿಸಲಿ ಎಂಬುದು ಸಾರ್ವಜನಿಕರ ಒತ್ತಾಯ.