ಕೊಪ್ಪಳ ಲೋಕಸಭಾ ಚುನಾವಣೆಯಲ್ಲಿ ಸೋತ ಮೇಲೆ ಬಿಜೆಪಿ ಅಭ್ಯರ್ಥಿ ಡಾ. ಬಸವರಾಜ ತಮ್ಮ ಆಸ್ಪತ್ರೆಗೆ ಸೀಮಿತ ಆಗ್ತಾರಾ? ಲೋಕಸಭಾ ಕ್ಷೇತ್ರದಲ್ಲಿರುವ ಕೇಂದ್ರದ ಯೋಜನೆಗಳ ಬಗ್ಗೆ ಗಮನಹರಿಸೋರು ಯಾರು ? ಎಂಬ ಚರ್ಚೆ ಸಾರ್ವಜನಿಕರಲ್ಲಿ ಇತ್ತು.
ಬುಧವಾರ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ, ಕೇಂದ್ರ ರಾಜ್ಯ ರೈಲ್ಗೆ ಸಚುವರಾದ ವಿ. ಸೋಮಣ್ಣರನ್ನು ದೆಹಲಿಯಲ್ಲಿ ಭೇಟಿಯಾಗಿ ಕ್ಷೇತ್ರದ ಯೋಜನೆಗಳ ಬಗ್ಗೆ ಗಮನಸೆಳೆದಿರುವ ಡಾ.ಬಸವರಾಜ ತಾವು ಸಕ್ರೀಯ ರಾಜಕಾರಣದಲ್ಲಿ ಇರುವ ಸಿಗ್ನಲ್ ನೀಡಿದ್ದಾರೆ.
ಸಿಂಧನೂರಿನ ಕೇಂದ್ರೀಯ ವಿದ್ಯಾಲಯದಲ್ಲಿ ಇದೇ ವರ್ಷದಿಂದ ಅಡ್ಮಿಷನ್ ಆರಂಭಿಸಬೇಕು. ತಳಕಲ್-ಕುಷ್ಟಗಿ ರೈಲು ಸಂಚಾರ ಆರಂಭಿಸಬೇಕು. ಬೆಳಗಾವಿ-ಭದ್ರಾಚಲಂ ರೈಲು ಮರು ಸಂಚಾರ ಆರಂಭಿಸಬೇಕು. ಹುಬ್ಬಳ್ಳಿ-ಬೆಂಗಳೂರು ನಡುವೆ ಗದಗ ಕೊಪ್ಪಳ ಹೊಸಪೇಟೆ ಬಳ್ಳಾರಿ ಮಾರ್ಗದಲ್ಲಿ ವಂದೇ ಭಾರತ್ ರೈಲು ಸಂಚಾರ ಆರಂಭಿಸಬೇಕು.ಬನ್ನಿಕೊಪ್ಪ , ಅಗಳಕೇರಿ ರಸ್ತೆಯ ರೈಲು ಮಾರ್ಗಕ್ಕೆ ಅಂಡರ್ ಪಾಸ್ , ಒವರ್ ಬ್ರಿಡ್ಜ್ ನಿರ್ಮಾಣ, ದರೋಜಿ ಗಂಗಾವತಿ ಬಾಗಲಕೋಟೆ ರೈಲು ಹೊಸ ರೈಲು ಮಾರ್ಗಕ್ಕೆ ಮನವಿ ನೀಡಿದ್ದಾರೆ ಡಾ. ಬಸವರಾಜ.
ಹಾಗೆ ನೋಡಿದರೆ ಬಿಜೆಪಿ ಟಿಕೆಟ್ ಸಂಗಣ್ಣ ಕರಡಿ ಬದಲು ಡಾ. ಬಸವರಾಜರಿಗೆ ಅನೌನ್ಸ್ ಆಗಿ ವಾರದವರೆಗೆ ಸಾರ್ವಜನಿಕರಲ್ಲಿ ಇದ್ದ ಪ್ರಶ್ನೆ ಒಂದೆ - ಸಂಗಣ್ಣ ಕರಡಿಯವರಿಗೆ ಟಿಕೆಟ್ ಇಲ್ಲ ಅಂದ್ರೆ ಹೇಗೆ ? ಬಿಜೆಪಿ ಗೆಲ್ಲುತ್ತಾ ?
ಟಿಕೆಟ್ ತಪ್ಪಿದ ನಂತರ ಸಂಗಣ್ಣ ಕರಡಿ ರಾಜಕೀಯ ನಿರ್ಧಾರ ತೆಗೆದೆಕೊಳ್ಳುವಲ್ಲಿ ವಿಳಂಬ ಮಾಡಿದ್ದಕ್ಕೆ ಸಾರ್ವಜನಿಕರಲ್ಲಿದ್ದ ಅವರ ಬಗ್ಗೆ ಅನುಕಂಪ ಆಕರ್ಷಣೆ ಕಡಿಮೆ ಆಯ್ತು. ಬಿಜೆಪಿಯಲ್ಲಿ ಕಡೆಗಣಿಸಲ್ಪಟ್ಟು ಕಾಂಗ್ರೆಸ್ ಸೇರುವ ಹೊತ್ತಿಗೆ ಅವರ ಬಗ್ಗೆ ಚರ್ಚೆ ಕಡಿಮೆ ಆಗುತ್ತ ಬಂತು.
ಸಂಗಣ್ಣ ಕರಡಿ ಬಿಜೆಪಿ ಬಿಟ್ಟ ಮೇಲೆ ಎಲೆಕ್ಷನ್ ನಲ್ಲಿ ಡಾ. ಬಸವರಾಜ ಮತಗಳಿಕೆ 5 ಲಕ್ಷಕ್ಕೆ ಸ್ಟಾಪ್ ಆಗುತ್ತೆ ಎಂಬ ಉಮೇದಿ ಕಾಂಗ್ರೆಸ್ ನಲ್ಲಿ ಮೂಡಿತ್ತು. ಮತದಾನ ದಿನ ಕೊಪ್ಪಳದ ಎಷ್ಟೋ ಬೂತ್ ಹತ್ತಿರ ಬಿಜೆಪಿಯವರು ಸರಿಯಾಗಿ ಕಾಣಿಸಿಕೊಳ್ಳಲಿಲ್ಲ. ಆದರೆ ಬಿಜೆಪಿ ಬೆಂಬಲಿಸುವ ಮತದಾರರು ಸ್ವಯಂಪ್ರೇರಿತವಾಗಿ ಮತಗಟ್ಟೆಗೆ ಬಂದಿದ್ದರು. ಪರಿಣಾಮ ಎಂಪಿ ಕ್ಯಾಂಡಿಡೇಟ್ , ಮಾಜಿ ಎಂಪಿ, ಹಾಲಿ MLA ಇರೋ ಕೊಪ್ಪಳ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ಕೇವಲ 7 ಸಾವಿರ ಲೀಡ್. ಬಿಜೆಪಿಗೆ 91 ಸಾವಿರ ಮತ !
2023 ರ ಚುನಾವಣೆ ಪ್ರಚಾರದಲ್ಲಿ ಡಾ. ಬಸವರಾಜ ಭಾಗವಹಿಸಿದ್ದರೆ ಲೋಕಸಭೆಗೆ ಗೆಲ್ಲುತ್ತಿದ್ದರೇನೊ...