ಕೊಪ್ಪಳ : ರಾಷ್ಡ್ರವ್ಯಾಪಿ ಬೇಡಿಕೆ ದಿನದ ಅಂಗವಾಗಿ CITU ಅಶೋಕ ಸರ್ಕಲ್ ನಲ್ಲಿ ಪ್ರತಿಭಟಿಸಿ ಜಿಲ್ಲಾಧಿಕಾರಿ ಕಚೇರಿ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮನವಿ ಸಲ್ಲಿಸಿತು.
ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಕಾನೂನು, ಕಾರ್ಮಿಕ ಸೆಸ್ ಕಾನೂನು ಉಳಿಸಬೇಕು. ಮಂಡಳಿ ನಿಧಿ ಕಟ್ಟಡ ಕಾರ್ಮಿಕರ ಸೌಲಭ್ಯಗಳಿಗೆ ಬಳಸಬೇಕು. ಪ್ರತಿ ಜಿಲ್ಲೆಯಲ್ಲಿ ಕಾರ್ಮಿಕ ನ್ಯಾಯಾಲಯ ಆರಂಭಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳಿಗಾಗಿ CITU ಅಶೋಕ ಸರ್ಕಲ್ ನಲ್ಲಿ ಪ್ರತಿಭಟಿಸಿತು.
ಕೈಗಾರಿಕಾ ವಿವಾದ ನಿರ್ದಿಷ್ಟ ಕಾಲಮಿತಿಯಲ್ಲಿ ಇತ್ಯರ್ಥಗೊಳ್ಳಲು ಕಾನೂನು ತಿದ್ದುಪಡಿ ಮಾಡಬೇಕು. ಅಂಗನವಾಡಿ ಬಿಸಿಊಟ ಆಶಾ ಕಾರ್ಯಕರ್ತೆಯತಿಗೆ ಕನಿಷ್ಠ 31 ಸಾವಿರ ಸಂಬಳ, ಕನಿಷ್ಠ 10 ಸಾವಿರ ಪೆನ್ಷನ್ ಕೊಡಬೇಕು.
ಕೆಲಸದ ಅವಧಿ ವಾರಕ್ಕೆ 36 ತಾಸು, ದಿನದ ಪಾಳಿ 6 ತಾಸಿಗೆ ಮಿತಿಗೊಳಿಸಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ನಿಗದಿ ಮಾಡಬೇಕು. ಗುತ್ತಿಗೆ ಕಾರ್ಮಿಕ ಪದ್ದತಿ ರದ್ದುಪಡಿಸಬೇಕು. ಸ್ಥಳೀಯ ಸಂಸ್ಥೆ , ಕೈಗಾರಿಕೆಗಳಲ್ಲಿ ಕೆಲಸ ಮಾಡುವ ಗುತ್ತಿಗೆ ಮತ್ತು ತಾತ್ಕಾಲಿಕ ಕಾರ್ಮಿಕ ಸೇವೆ ಖಾಯಂಗೊಳಿಸಲು ತಮಿಳುನಾಡು, ಆಸ್ಸಾಂ ಮಾದರಿ ಕಾನೂನು ಜಾರಿ ತರಬೇಕು ಎಂಬುದು ಸೇರಿದಂತೆ 30 ಬೇಡಿಕೆಗಳೊಂದಿಗೆ ಪ್ರತಿಭಟಿಸಿ ಡಿಸಿ ಕಚೇರಿ ಮೂಲಕ ಮನವಿ ಸಲ್ಲಿಸಿದರು.
CITU ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾಸಿಂ ಸರದಾರ, ಪ್ರಾಂತ ರೈತ ಸಂಘದ ದೊಡ್ಡನಗೌಡ ಪಾಟೀಲ್, ಹನುಮಂತ ಗುರಿಕಾರ, ವಾಸಿಂ ಸಿದ್ನೆಕೊಪ್ಪ , ಮೀರಾಸಾಬ, ರಂಜಾನ್ ಸಾಬ, ಷಷ್ಮುಖಪ್ಪ , ಅಲ್ಲಾಬಿ , ಸಾವಿತ್ರಿ, ಹನುಮಪ್ಪ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.