ಕೊಪ್ಪಳದ ರಿಯಲ್ ಎಸ್ಟೇಟ್ ವ್ಯವಹಾರಕ್ಕೆ 5 ಲಕ್ಷ ರೂಪಾಯಿ ತರುತ್ತಿದ್ದ ಮೂವರಿಗೆ ಖಾರಪುಡಿ ಎರಚಿ ಹಲ್ಲೆ ಮಾಡಿ ಹಣ ದರೋಡೆ ಮಾಡಿದ ಘಟನೆ ಮುದುಗಲ್ - ಲಿಂಗಸೂರು ರಸ್ತೆಯಲ್ಲಿ ನಡೆದಿದೆ.
ಜೂನ್ 2 ಮಧ್ಯಾಹ್ನ ಹನ್ನೆರಡೂವರೆ ಸುಮಾರಿಗೆ ಬೈಕ್ ಗಳಲ್ಲಿ ಬಂದ 5 ಜನ 5 ಲಕ್ಷ ರೂಪಾಯಿ ದರೋಡೆ ಮಾಡಿದ್ದಾರೆ.
ಲಿಂಗಸೂರಿನ ಶಿವಾನಂದ ಐದನಾಳ, ಖಾಲಿದ್ ಅವರು ಚಾಲಕ ವಿಜಯಮಹಾಂತೇಶ ಜೊತೆ ಇನ್ನೊವಾ ಕಾರ್ ನಲ್ಲಿ ಲಿಂಗಸೂರಿನಿಂದ ಕೊಪ್ಪಳಕ್ಕೆ ಬರುತ್ತಿದ್ದರು. ಕಾರಿನಲ್ಲಿ 5 ಲಕ್ಷ ರೂಪಾಯಿ ನಗದು ಹಣ ಇತ್ತು. ಈ ಹಣ ಕೊಪ್ಪಳದಲ್ಲಿ ರಿಯಲ್ ಎಸ್ಟೇಟ್ ಲೇಔಟ್ ಡೆವಲಪ್ಮೆಂಟ್ ಸಲುವಾಗಿ ತರಲಾಗುತ್ತಿತ್ತು.
ಮಧ್ಯಾಹ್ನ ಹನ್ನೆರಡೂವರೆ ಸುಮಾರಿಗೆ ನಂಬರ್ ಪ್ಲೇಟ್ ಇಲ್ಲದ ಕಪ್ಪು ಬಣ್ಣದ ಬೈಕ್ ಗಳಲ್ಲಿ ಬಂದವರು ಹಣ ದರೋಡೆ ಮಾಡಿ ಪರಾರಿಯಾಗಿದ್ದಾರೆ.
ಘಟನೆ ತಾವರಗೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ.