Advt. 
 Views   577
Jul 1 2024 4:06PM

ಶ್ರೀ ಮರಿಶಾಂತವೀರ ಮಹಾಸ್ವಾಮಿಗಳ ಅಕ್ಷರ ಕ್ರಾಂತಿ ಇಂದು ಫಲ ನೀಡುತ್ತಿದೆ


ಕೊಪ್ಪಳ : ಶ್ರೀಗವಿಮಠದ ಲಿಂ. ಶ್ರೀ ಮರಿಶಾಂತವೀರ ಮಹಾಸ್ವಾಮಿಗಳು ಅಂದು ನೆಟ್ಟ ಶಿಕ್ಷಣದ ಮರ ಇಂದು ಅಕ್ಷರಗಳ ಕ್ರಾಂತಿ ರೂಪದಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ನೆರಳು ನೀಡುತ್ತ ಲಕ್ಷೋಪ ಲಕ್ಷ ಮಕ್ಕಳ ಭವಿಷ್ಯ ರೂಪಿಸಿದೆ ಎಂದು ಉಪನ್ಯಾಸಕರಾದ ಡಾ.ಸಿದ್ಧಲಿಂಗಪ್ಪ ಕೊಟ್ನೆಕಲ್  ನುಡಿದರು. 

ಅವರು ಸೋಮವಾರ ಶ್ರೀ ಗವಿಸಿದ್ಧೇಶ್ವರ ಹಾಗೂ ಪಿ.ಎಸ್.ಎಮ್.ಎಸ್ ಪದವಿ ಪೂರ್ವ ಕಾಲೇಜುಗಳ ಸಂಯಕ್ತಾಶ್ರಯದಲ್ಲಿ ಲಿಂ.ಜ. ಶ್ರೀ ಮರಿಶಾಂತವೀರ ಮಹಾಸ್ವಾಮಿಗಳ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. 

ಅಂದು ಈ ಭಾಗದಲ್ಲಿ ಶಿಕ್ಷಣ ಎನ್ನುವುದು ಮರಿಚಿಕೆಯಾಗಿತ್ತು ಪ್ರಾಥಮಿಕ, ಪ್ರೌಢ ಶಾಲೆಗಳು ಅಪರೂಪವಾಗಿದ್ದವು. ಕಾಲೇಜು ಶಿಕ್ಷಣಕ್ಕೆ ದೂರದ ಹೈದರಬಾದಗೆ ಹೋಗಬೇಕಿತ್ತು. ಇದನ್ನು ಮನಗಂಡ ಶ್ರೀಗಳು ಪ್ರಾಥಮಿಕ, ಪ್ರೌಢ ಮತ್ತು ಪ ಪೂ ಕಾಲೇಜ್ ಸ್ಥಾಪಿಸಿ ಈ ಭಾಗದಲ್ಲಿ ಶಿಕ್ಷಣದ ಕ್ರಾಂತಿ ಮಾಡಿದರು. ಶ್ರೀ ಗವಿಸಿದ್ಧೇಶ್ವರ ವಿದ್ಯಾವರ್ಧಕ ಸಂಸ್ಥೆ ಸ್ಥಾಪಿಸಿ  ಅದಕ್ಕೆ ಕಾಯಕಲ್ಪ ಕೊಟ್ಟ ಕೀರ್ತಿ ಪೂಜ್ಯರಿಗೆ ಸಲ್ಲುತ್ತದೆ. ಅಂತಹ ಪೂಜ್ಯರನ್ನು ನಾವು ಸದಾ ಸ್ಮರಣೆ ಮಾಡುತ್ತಿರಬೇಕು ಎಂದು ಕೋಟ್ನೆಕಲ್ ಹೇಳಿದರು.

ಈ ಸಂದರ್ಭದಲ್ಲಿ ಶ್ರೀ ಗವಿಸಿದ್ಧೇಶ್ವರ ಪ ಪೂ ಕಾಲೇಜ್ ಪ್ರಾಚಾರ್ಯರಾದ ಡಾ. ವಿರೇಶಕುಮಾರ ಎನ್.ಎಸ್ ಮತ್ತು ಪಿ.ಎಸ್.ಎಮ್.ಎಸ್ ಪ ಪೂ ಕಾಲೇಜ್ ಪ್ರಾಚಾರ್ಯರಾದ  ಅಗಸ್ಟಿನ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು. 

ಉಪನ್ಯಾಸಕರಾದ ಡಾ. ಬಾಳಪ್ಪ ತಳವಾರ, ಕಮಲಾ ಅಳವಂಡಿ ಕಾರ್ಯಕ್ರಮ ನಿರ್ವಹಿಸಿದರು.



Share this news

 Comments   0

Post your Comment

PEOPLE'S OPINION

Be the first person to comment this.

ಹೊಸ ಸುದ್ದಿಗಳು


Jul 6 2025 9:04AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಇನ್ನೂ 3 ವರ್ಷ ಐತಿ ರಸ್ತೆ ಮಾಡಿಸೋಣ : ರಾಯರಡ್ಡಿ
Jul 4 2025 8:57PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಸಕ್ಕರೆ ಕಾರ್ಖಾನೆಗೆ ಎನ್ಓಸಿ ಕೊಡಬೇಡಿ : ಗ್ರಾಮಸ್ಥರ ಒತ್ತಾಯ
Jul 2 2025 9:14PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕರೆಂಟ್ ಕನೆಕ್ಷನ್ ಕಟ್ ಮಾಡಲು ಹೋದವರು ಕರೆಂಟ್ ಬಿಲ್ ಕಟ್ಟಿದರು
Jul 1 2025 8:01AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕಾಮಗಾರಿ ಗುತ್ತಿಗೆ ಹಿಟ್ನಾಳ್ ಕುಟುಂಬದ ಕಪಿಮುಷ್ಠಿಯಲ್ಲಿ : ಸಿವಿಸಿ
Jun 26 2025 11:48AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಗಂಗಾವತಿ ಇಂಜಿನಿಯರಿಂಗ್ ಕಾಲೇಜ್ ಕಳಪೆ ಕಾಮಗಾರಿ
Jun 25 2025 8:29PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳದಲ್ಲಿ ಅಭಿವೃದ್ದಿ ಏಕೆ ಮಾಯವಾಗಿದೆ ?
Jun 24 2025 4:58PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ನಮ್ಮ ಊರಿನ ಹತ್ರ ಸಕ್ಕರೆ ಫ್ಯಾಕ್ಟರಿ ಬೇಡ
Jun 24 2025 3:53PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕುಷ್ಟಗಿ : ವಸತಿ ಇಲಾಖೆಯಲ್ಲಿ ಲಂಚ ಆರೋಪ : ತನಿಖೆ ನಡೆಯಲಿ
Jun 23 2025 9:11AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಡಾ. ಬಸವರಾಜ ದಿಂಡೂರ ಅಭಿನಂದನಾ ಗ್ರಂಥ ಬಿಡುಗಡೆ
Jun 22 2025 1:35PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ತಪ್ಪಿದ ಭಾರಿ ಅನಾಹುತ





     
Copyright © 2021 Agni Divya News. All Rights Reserved.
Designed & Developed by We Make Digitize