ಕೊಪ್ಪಳ ನಗರದಲ್ಲಿ ವಾಹನಗಳು ಅತಿವೇಗವಾಗಿ ಚಾಲನೆ ಆಗುತ್ತಿದ್ದರೂ, ನಗರದ ಹೊರವಲಯದಲ್ಲಿ ಬೈಪಾಸ್ ಇದ್ದರೂ ಬೃಹತ್ ವಾಹನಗಳು ನಗರದ ಮೂಲಕ ಸಂಚರಿಸಿದರೂ ಸಂಬಂಧಿಸಿದ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿಲ್ಲ. ಅನಾಹುತಗಳು ಸಂಭವಿಸಿದರೆ ಅಧಿಕಾರಿಗಳೆ ಹೊಣೆ ಎಂದು ಬಿಎಸ್ಪಿ ಜಿಲ್ಲಾಧ್ಯಕ್ಷರಾದ ಕೆ.ಎಸ್.ಮೈಲಾರಪ್ಪ ವಕೀಲರು ಹೇಳಿದರು.
ರವಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಆಡಳಿತ ವರ್ಗ ಜನರಪರ ಕೆಲಸ ಮಾಡುವುದು ಬಿಟ್ಟು ಜನಪ್ರತಿನಿಧಿಗಳ, ಶ್ರೀಮಂತರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ.
ಅತಿವೇಗದಿಂದ ವಾಹನ ಚಾಲನೆ ಮಾಡಿ ಅಮಾಯಕರ ಜೀವ ಹಾನಿಯಾದರೆ ಅವರನ್ನು ನಂಬಿದ ಕುಟುಂಬದ ಗತಿ ಏನು ? ಮಕ್ಕಳು ಶಾಲೆಗೆ ಹೋಗಿ ಬರುವುದು ಕಷ್ಟಕರವಾಗುತ್ತಿದೆ. RTO ಕಚೇರಿ ಅಧಿಕಾರಿಗಳು ಯಾವ ಕ್ರಮವನ್ನೂ ಜರುಗಿಸುತ್ತಿಲ್ಲ. ಕೊಪ್ಪಳದಲ್ಲಿ ಟ್ರಾಫಿಕ್ ಪೊಲೀಸ್ ಸ್ಟೇಷನ್ ಇದ್ದೂ ಇಲ್ಲದಂತಾಗಿದೆ. ಕೇವಲ ಅಮಾಯಕರನ್ನು, ಶಾಲೆಗೆ ಮಕ್ಕಳನ್ನು ಬಿಡಲು ಹೋದವರನ್ನು , ಗೃಹಬಳಕೆ ಸಾಮಾನು ತರಲು ಹೋದವರ ವಾಹನಗಳಿಗೆ ದಂಡ ಹಾಕುತ್ತಿದ್ದು ಅತಿವೇಗ ವಾಹನ ಚಾಲನೆ ಮಾಡುವವರತ್ತ ಇವರು ಕಣ್ಣೆತ್ತಿ ನೋಡುವುದೂ ಇಲ್ಲ .
ಕೂಡಲೇ ಜಿಲ್ಲಾಡಳಿತ ಈ ಸಮಸ್ಯೆಯತ್ತ ಗಮನಹರಿಸಬೇಕು. ಜನಸಾಮಾನ್ಯರ ರಕ್ಷಣೆಗೆ ಮುಂದಾಗಬೇಕು. ಇಲ್ಲವಾದರೆ ಪ್ರತಿಭಟನೆ ಅನಿವಾರ್ಯ ಎಂದು ಮೈಲಾರಪ್ಪ ಹೇಳಿದರು.
ಈ ಸಂದರ್ಭದಲ್ಲಿ ಸಂಜೀವಮೂರ್ತಿ ಇತರರು ಉಪಸ್ಥಿತರಿದ್ದರು.