ಕೊಪ್ಪಳ ಲೋಕಸಭಾ ಚುನಾವಣೆ ಮತ ಎಣಿಕೆ ತೀವ್ರ ಕುತೂಹಲ ಹುಟ್ಟಿಸಿತ್ತು. ಬಿಜೆಪಿ ಕಾಂಗ್ರೆಸ್ ನಡುವೆ ಭಯಂಕರ ಜಿದ್ದಾಜಿದ್ದಿ ಹಾವು ಏಣಿ ಆಟದಂತೆ ಮತಗಳಿಕೆ ಏರಿಳಿತ ಕಂಡು ಕೊನೆಗೆ ಕಾಂಗ್ರೆಸ್ ನ ರಾಜಶೇಖರ ಹಿಟ್ನಾಳ 46357 ಮತಗಳಿಂದ ಗೆದ್ದಿದ್ದಾರೆ.
ಗೆದ್ದ ರಾಜಶೇಖರ ಹಿಟ್ನಾಳ 663511 ಮತ ಪಡೆದರೆ , ಬಿಜೆಪಿಯ ಡಾ. ಬಸವರಾಜ 617154 ಮತ ಪಡೆದು 46357 ಮತಗಳಿಂದ ಸೋತಿದ್ದಾರೆ.
ರಾಜಶೇಖರ ಗೆಲುವಿನ ಮೂಲಕ 2004 ರ ನಂತರ ಈಗ 20 ವರ್ಷಗಳ ನಂತರ ಕಾಂಗ್ರೆಸ್ ಗೆದ್ದಿದ್ದು 2009 ರಿಂದ ನಡೆದಿದ್ದ ಬಿಜೆಪಿಯ ಗೆಲುವಿಗೆ ಕಾಂಗ್ರೆಸ್ ಬ್ರೇಕ್ ಹಾಕಿದೆ. ಕೊಪ್ಪಳ ಲೋಕಸಭೆ ಚುನಾವಣೆಯಲ್ಲಿ ಹ್ಯಾಟ್ರಿಕ್ ಸಾಧಿಸಿದ್ದ ಬಿಜೆಪಿ ಈಗ ಸೋತಿದ್ದರೂ ಹೊಸ ಮುಖ ಡಾ. ಬಸವರಾಜರನ್ನು ಕಣಕ್ಕಿಳಿಸಿ ತೀವ್ರ ಪೈಪೋಟಿ ನೀಡಿದೆ.
[ ಅಂಚೆ ಮತಗಳಲ್ಲಿ ಬಿಜೆಪಿ ಅಭ್ಯರ್ಥಿ ಡಾ. ಬಸವರಾಜ ಹೆಚ್ಚು ಅಂದ್ರೆ 2288 ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ 1590 ಮತಗಳನ್ನು ಪಡೆದಿದ್ದಾರೆ ]