ಕೊಪ್ಪಳ : ಚುನಾವಣೆ ನೀತಿ ಸಂಹಿತೆ ನೆಪದಲ್ಲಿ ತಡೆದಿರುವ ಕಟ್ಟಡ ಕಾರ್ಮಿಕರ ಸೌಲಭ್ಯಗಳ ಅರ್ಜಿ ಸ್ವೀಕಾರ ಅಗಸ್ಟ್ ವರೆಗೆ ವಿಸ್ತರಿಸಬೇಕು ಮತ್ತು ನಿಜವಾದ ಕಟ್ಟಡ ಕಾರ್ಮಿಕರ ಅರ್ಜಿ ತಿರಸ್ಕರಿಸುತ್ತಿರುವ ಕಾರ್ಮಿಕ ಅಧಿಕಾರಿ ಹೇಮಂತ್ ವಿರುದ್ದ ಸೂಕ್ತ ಕ್ರಮ ಜರುಗಿಸಬೇಕು ಎಂದು ಕಟ್ಟಡ ಕಾರ್ಮಿಕರ ಸಂಘಟನೆ ಶನಿವಾರ ಆಗ್ರಹಿಸಿತು.
ಕೊಪ್ಪಳ ಜಿಲ್ಲಾಧಿಕಾರಿಗಳ ಮೂಲಕ ಕಾರ್ಮಿಕ ಸಚಿವ ಸಂತೋಷ ಲಾಡ್ ಅವರಿಗೆ ಮನವಿ ಸಲ್ಲಿಸಿದ ಸಂಘಟನೆ ಮುಖಂಡರು ಹಾಗೂ ಕಾರ್ಮಿಕರು ಸೌಲಭ್ಯಗಳಿಂದ ವಂಚಿತರನ್ನಾಗಿಸುವ ಪ್ರಯತ್ನದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಚುನಾವಣೆ ನೀತಿ ಸಂಹಿತೆ, ಸಾಫ್ಟ್‌ವೇರ್ ನೆಪ ಒಡ್ಡಿ ಕಟ್ಟಡ ಕಾರ್ಮಿಕರ ಪಿಂಚಣಿ, ವೈದ್ಯಕೀಯ, ಹೆರಿಗೆ, ಮದುವೆ, ಶೈಕ್ಷಣಿಕ ಸಹಾಯ ಧನ ಅರ್ಜಿ ಸ್ವೀಕರಿಸುತ್ತಿಲ್ಲ. 2021 ರ ಅಧಿಸೂಚನೆ ಮರು ಜಾರಿಗೊಳಿಸಿ ಅದೇ ರೀತಿಯ ಸಹಾಯ ಧನ ವಿತರಿಸಬೇಕು ಮತ್ತು ಶೈಕ್ಷಣಿಕ ಅರ್ಜಿಗಳನ್ನು ಅಗಸ್ಟ್ 31 ರವರೆಗೆ ಸ್ವೀಕರಿಸಬೇಕು.
ಹೈಕೋರ್ಟ್ ಆದೇಶದಂತೆ ವಿದ್ಯಾರ್ಥಿನಿಯರಾದ ಅಮೃತಾ, ಅಕ್ಷತಾ, ಅವರಿಗೆ ಕೂಡಲೇ ದಂಡ ಸಹಿತ ಶೈಕ್ಷಣಿಕ ಸಹಾಯ ಧನ ಪಾವತಿಸಬೇಕು ಎಂದು ಆಗ್ರಹಿಸಿ ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನೆ ನೇತೃತ್ವವನ್ನು ಜಿಲ್ಲಾಧ್ಯಕ್ಷರಾದ ಕಾಸಿಂ ಸರ್ದಾರ್ ತಾಲೂಕ ಮುಖಂಡ ಹನುಮೇಶ ಭೋವಿ, ಇಸ್ಮಾಯಿಲ್ ಅಟೋ ಚಾಲಕರ ಸಂಘದ ಸಂಜಯದಾಸ ಕೌಜಗೇರಿ ಅಗಲಕೆರ ದುರ್ಗಮ್ಮ ವಡ್ಡರ್, ಹನುಮಂತಪ್ಪ ಗುರಿಕಾರ್ , ವಾಸಿಂ ಸಿದ್ನೆಕೊಪ್ಪ , ಮಂಜಪ್ಪ ಅಂಜನಪ್ಪ ಮೈಬೂಬ್ ದಫೆದಾರ್, ಮಹೇಶ್ ಕುರುಬರ , ಮುತ್ತುಸಾಬ್ ನದಾಫ್ , ಗವಿಸಿದ್ದಪ್ಪ ಚೌಡ್ಕಿ , ಮೈಲಾರಪ್ಪ ಮುಂಡರಗಿ , ಅಮೀರ್ ಪಾಷಾ ಇಮಾಮಲಿ , ನಾರಾಯಣಪೇಟ ಶೇಕ ಸಾಬ್ ಇತರರು ವಹಿಸಿದ್ದರು.