ಕೊಪ್ಪಳ : ಶ್ರೀ ಹುಲಿಗೆಮ್ಮ ದೇವಿ ಜಾತ್ರೆಗೆ ಪಾದಯಾತ್ರೆ ಮೂಲಕ ಹೊರಟಿದ್ದ ಹಿನ್ನೆಲೆಯಲ್ಲಿ ಭಕ್ತಯಾತ್ರಿಗೆ ಲಾರಿ ಹಾಯ್ದು ಓರ್ವ ಸಾವಿಗೀಡಾಗಿ ಓರ್ವನ ಕಾಲು ತುಂಡಾಗಿ ಮೇಲ್ಸೇತುವೆ ಮೇಲಿನಿಂದ ಬಿದ್ದ ಹೃದಯ ವಿದ್ರಾವಕ ಘಟನೆ ಶುಕ್ರವಾರ ಮುಂಜಾನೆ ಜರುಗಿದೆ.
ಘಟನೆಯು ತಾಲೂಕಿನ ಕೆರೆಹಳ್ಳಿ ಗ್ರಾಮದ ಹೆದ್ದಾರಿಯ ಮೇಲ್ಸೇತುವೆ ಮೇಲೆ ಜರುಗಿದೆ.
ಮೃತನನ್ನು ಬಾಗಲಕೋಟೆ ಜಿಲ್ಲೆಯ ಹುನುಗುಙದ ತಾಲೂಕಿನ ರಕ್ಕಸಗಿಯ ಯಮನೂರಪ್ಪ ಸಣ್ಣಮನಿ (34) ಎಂದು ತಿಳಿದು ಬಂದಿದೆ.
ಮೃತನ ಜೊತೆ ಪಾದಯಾತ್ರೆಯಲ್ಲಿದ್ದ ಮಹಾಂತೇಶಗೂ ಲಾರಿ ಹರಿದು ಮೊಳಕಾಲು ಬಳಿ ಕಾಲು ತುಂಡಾಗಿ ನಜ್ಜುಗುಜ್ಜಾಗಿದ್ದು ಲಾರಿ ಹರಿದ ರಭಸಕ್ಕೆ ಮೇಲ್ಸೇತುವೆ ಮೇಲಿನಿಂದ ಬಿದ್ದಿದ್ದಾನೆ ಎಂದು ತಿಳಿದು ಬಂದಿದ್ದಾನೆ.
ಗಾಯಾಳು ಮಹಾಂತೇಶ್ ನನ್ನು ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಮುನಿರಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ಜರುಗಿದೆ.