ಕೊಪ್ಪಳ : ಜೂನ್ 4 ರಂದು ಜರುಗುವ ಲೋಕಸಭಾ ಚುನಾವಣೆ ಮತ ಎಣಿಕೆ ನಿಷ್ಪಕ್ಷಪಾತವಾಗಿ ನಡೆಯುವಂತೆ ಜಿಲ್ಲಾಧಿಕಾರಿ ಗಳು ಮುತುವರ್ಜಿ ವಹಿಸಬೇಕು ಎಂದು ಎದ್ದೇಳು ಕರ್ನಾಟಕ ಸಙಘಟನೆಯ ಅಲ್ಲಮಪ್ರಭು ಬೆಟ್ಟದೂರು ಹೇಳಿದರು.
ಬುಧವಾರ ಕೊಪ್ಪಳ ಮೀಡಿಯಾ ಕ್ಲಬ್ ನಲ್ಲಿ ಮಾತನಾಡಿದ ಅವರು ಎದ್ದೇಳು ಕರ್ನಾಟಕ ಸಂಘಟನೆಯ ಉನ್ನತ ಸಭೆ ಮೇ.21 ರಂದು ಬೆಂಗಳೂರಿನಲ್ಲಿ ಜರುಗಿತು. ಸಭೆಯಲ್ಲಿ ಐದು ಪ್ರಮುಖ ನಿರ್ಣಯ ಕೈಗೊಳ್ಳಲಾಗಿದೆ.
ಮತ ಎಣಿಕೆ ಸಂದರ್ಭದಲ್ಲಿ ವಂಚನೆ ಬಗ್ಗೆ ನಿಗಾವಹಿಸಲು ಹಾಗೂ ಜಾಗೃತಿ ಮೂಡಿಸಲು ಮುಂಜಾಗ್ರತ ಕ್ರಮ ಕೈಗೊಳ್ಳುವುದು, ಮತ ಎಣಿಕೆ ಮೇಲ್ವಿಚಾರಣೆ ನಡೆಸುವಂತೆ ಸುಪ್ರೀಂ ಕೋರ್ಟ್ ಗೆ ಮನವಿ ಮಾಡುವುದು, ರಾಜಕೀಯ ಪಕ್ಷಗಳಿಗೆ ಅವರ ಕರ್ತವ್ಯ ಮನವರಿಕೆ ಮಾಡಿಸುವುದು ವಿವಿಧ ನಿರ್ಣಯ ಕೈಗೊಳ್ಳಲಾಗಿದೆ.
ಚುನಾವಣಾಧಿಕಾರಿಗಳು ( ಜಿಲ್ಲಾಧಿಕಾರಿಗಳು) ಮತ ಎಣಿಕೆಯನ್ನು ಸಮರ್ಪಕವಾಗಿ ನಿಭಾಯಿಸಲು ಮನವಿ ಮಾಡುತ್ತೇವೆ ಎಂದರು.
ಈ ಸಂದರ್ಭದಲ್ಲಿ ಕೆವಿಎಸ್ ನ ದುರುಗೇಶ ಬರಗೂರು, ಯಮನೂರಪ್ಪ ಈಳಿಗನೂರು, ಫಾದರ್ ಚೆನ್ನಬಸಪ್ಪ ಅಪ್ಪನ್ನವರ್, ಶರಣು ಉಪಸ್ಥಿತರಿದ್ದರು.