ಮೊದಲ ಮಳೆಯ ಸಂಭ್ರಮ
ಭೂವಿಗೆ ಮೊದಲ ಮಳೆಯ ಸಂಭ್ರಮ
ನೆಲವೆಲ್ಲಾ ಮಳೆಗೆ
ಹಸಿಯಾಗಿದೆ
ಮರದ ಎಲೆಗಳ ಮೇಲೆ
ತುಂತುರು ಹನಿಗಳು
ಮಿನುಗುತ್ತಲಿವೆ
ತಂಪಾದ ವಾತಾವರಣ
ಭೂಮಿಯ ಮೇಲೆ
ಸುರಿಯುವ ಮಳೆಗೆ
ಉಕ್ಕಿ ಹರಿಯುತ್ತಲಿವೆ
ಮನದಲ್ಲಿ ಭಾವನೆಗಳು
ತೇಲಿ ಬರುತಲಿವೆ
ಮಾಸದ ನೆನಪುಗಳು
ಭೂಮಿ ಮೇಲೆ
ಮಳೆ ಹನಿಗಳ ಸಿಂಚನ
ಮನದ ಒಳಗೆ
ನೆನಪುಗಳ ಸಂಚಲನ
ಇಂತಹ ಪ್ರಕೃತಿಯ ವಿಸ್ಮಯ
ಕಣ್ಣು ತುಂಬಿಕೊಳ್ಳಲು
ಕಣ್ಣುಗಳಿಗೆ ಸದಾ ಆತುರ ಕಾತುರ.
- ರಾಜೇಸಾಬ ಕೆ. ರಾಟಿ