ಯುಗಾದಿ
ಯುಗಾದಿ ಬಂದಿತು ಆನಂದ ತಂದಿತು
ಬೇವು ಬೆಲ್ಲ ತಿನ್ನಿರಿ ಎಂದಿತು
ಕಷ್ಟ ಸುಖ ಸಮನಾಗಿ ಸ್ವೀಕರಿಸಿ ಎಂದಿತು
ತಳಿರು ತೋರಣ ಮನೆಯ ಮುಂಬಾಗಲಿಗೆ
ಮನೆಯ ಮುಂದೆ ಬಣ್ಣ ಬಣ್ಣದ ರಂಗೋಲಿ
ಮನೆಯ ತುಂಬೆಲ್ಲಾ ಸಂಭ್ರಮವೊ ಸಂಭ್ರಮ
ಸಂಪ್ರದಾಯದ ಸಂಭ್ರಮವ ಆನಂದಿಸಿ ಎಂದಿತು
ಗಿಡ ಮರಗಳಲ್ಲಿ ಹೊಸ ಚಿಗುರು ಮೂಡಿತು
ಹೊಸ ವರುಷ ಆರಂಭ ಎಂದಿತು
ಸೃಷ್ಠಿಯ ಮೊದಲ ದಿನ ಆರಂಭ
ಕಹಿ ನೆನಪು ಮರೆಯಾಗಿ ಸಿಹಿ ನೆನಪು ಸ್ಥಿರವಾಗಿ
ನಲಿವು ಮೂಡುತಲಿರಲಿ ಚಿಗುರೆಲೆಯಾಗಿ.
- ರಾಜೇಸಾಬ ಕೆ. ರಾಟಿ