Advt. 
 Views   554
Dec 14 2023 11:13PM

ಫಿಲಿಫೈನ್ಸ್ ದೇಶದಲ್ಲಿ ಪ್ರದರ್ಶನಗೊಂಡ ಸಿನಿಮಾ !


ಕೊಪ್ಪಳ : ತಾಲೂಕಿನ ಬಿಸರಳ್ಳಿ ಮೂಲದ ಪ್ರತಿಭೆಗಳಾದ ಪ್ರತೀಕ್ ಮತ್ತು ಪ್ರೀತಮ್ ಜೊತೆ ಅನೇಕ ಬಾಲ ಪ್ರತಿಭೆಗಳು ನಟಿಸಿರುವ ಓ ನನ್ನ ಚೇತನ ಸಿನಿಮಾ ಡಿ. 15 ರಂದು ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದ್ದು ಕೊಪ್ಪಳದ ಲಕ್ಷ್ಮೀ ಚಿತ್ರಮಂದಿರದಲ್ಲಿಯೂ ಬಿಡುಗಡೆ ಇದೆ.

ರವಿಚಂದ್ರನ್ ರವರ ಫೆವರೆಟ್ ಸಿನಿಮಾ 'ಅಪೂರ್ವ' ದ ನಾಯಕಿ ಅಪೂರ್ವ ನಿರ್ದೇಶಿಸಿರುವ, ಯೋಗೇಶ್ - ರಾಧಿಕಾ ಪಂಡಿತ್ ನಟನೆಯ ಹಿಟ್ ಸಿನಿಮಾ 'ಅಲೆಮಾರಿ' ಯ ನಿರ್ದೇಶಕ ಹರಿ ಸಂತು ಕತೆ ಚಿತ್ರಕತೆ ಸಂಭಾಷಣೆ ಬರೆದಿರುವ, ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅವಾರ್ಡ್ ಪಡೆದ , ಅಪ್ಪು ಚಲನಚಿತ್ರೋತ್ಸವದಲ್ಲಿ ಉತ್ತಮ ನಿರ್ದೇಶನ ಪ್ರಶಸ್ತಿ ಪಡೆದ ಸಿನಿಮಾ ಓ ನನ್ನ ಚೇತನ. 

ಇಷ್ಟೆಲ್ಲ ಹೆಗ್ಗಳಿಕೆಯ ಈ ಸಿನಿಮಾದ ಇನ್ನೊಂದು ಹೆಗ್ಗಳಿಕೆ ಅಂದ್ರೆ ಈಗಾಗಲೇ ಓ ನನ್ನ ಚೇತನ  ಫಿಲಿಫೈನ್ಸ್ ದೇಶದಲ್ಲಿ ಹತ್ತಾರು ಶೋ ಕಂಡಿದೆ.

ಈ ಸಿನಿಮಾ ಶೂಟಿಂಗ್ ಆಗಿದ್ದೆ ಲಾಕ್ ಡೌನ್ ಟೈಂಲ್ಲಿ. ಹರಿ ಸಂತು ಅವರಿಗೆ ಲಾಕ್ ಡೌನ್ ಟೈಂಲ್ಲಿ ಅಮೇರಿಕಾದ ಚಿಕಾಗೊದಿಂದ ಡಾ. ನಾರಾಯಣ ಹೊಸ್ಮನೆಯವರು ಕರೆ ಮಾಡಿ ಮಾತನಾಡುತ್ತ 9 ವರ್ಷದ ಒಳಗಿನ ಮಕ್ಕಳ ಮೆದುಳಿನ ಕೋಶಗಳು ತುಂಬಾ ಸೂಕ್ಷ್ಮ ಆಗಿರುತ್ತವೆ. ಅವರಿಗೆ ಮೊಬೈಲ್ ಕೊಟ್ಟರೆ ಮುಂದೆ ಬ್ರೈನ್ ಟೂಮರ್ ಆಗುವ ಸಾಧ್ಯತೆ ಇರುತ್ತೆ ಅಂತ ಹೇಳಿ ಅಮೇರಿಕದಲ್ಲಿ ಬ್ರೈನ್ ಟೂಮರ್ ನಿಂದ ಮಕ್ಕಳಿಗೆ ಆಗಿರುವ ಹಾನಿ ಬಗ್ಗೆ ಹೇಳಿದ್ದಾರೆ.

ಇದು ಕೇಳಿದ ನಂತರ ಓ ನನ್ನ ಚೇತನ ಸಿನಿಮಾ ಕತೆ ಮೂಡಿದ್ದು.

ಲಾಕ್ ಡೌನ್ ಅಂದ್ರೆ  ಭಯದಲ್ಲಿ ಸಾವಿನ ಸುದ್ದಿ ಕೇಳುತ್ತಿದ್ದ ದಿನಗಳು. ಆಗ ಎಲ್ಲರಿಗೂ ಸಾಥ್ ಕೊಟ್ಟಿದ್ದು ಮೊಬೈಲ್. ಶಾಲಾ ಮಕ್ಕಳಿಗೆ ಮನೆಯಿಂದ ವಿದ್ಯೆ ಕಲಿಯೋಕೆ ಆನ್ ಲೈನ್ ಕ್ಲಾಸ್ ಆರಂಭವಾದವು.

ಅಂಥ ಮೊಬೈಲ್ ಎಫೆಕ್ಟ್ ಹೇಳುವ ಕತೆಯ ಈ ಸಿನಿಮಾ ಮಕ್ಕಳೊಂದಿಗೆ ಪಾಲಕರು ನೋಡಬೇಕಾದ ಮಕ್ಕಳ ಸಿನಿಮಾ ಇದು.Share this news

 Comments   0

Post your Comment

PEOPLE'S OPINION

Be the first person to comment this.

ಹೊಸ ಸುದ್ದಿಗಳು


Jun 14 2024 8:17PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ ಜಿಲ್ಲಾ ಲಿಂಗಾಯತ ಸಮಾವೇಶ
Jun 13 2024 4:57PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಮಳೆ ನೀರು ಮನೆ ಹೊಕ್ಕುವ ಭೀತಿ
Jun 13 2024 3:27PM | ಜಿಲ್ಲಾ ಸುದ್ದಿಗಳು | ಕೊಪ್ಪಳ ತಹಶೀಲ್ ಕಚೇರಿ ಶಿರಸ್ತೇದಾರ ಲೋಕಾಯುಕ್ತ ಬಲೆಗೆ
Jun 11 2024 7:52PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಹದಗೆಟ್ಟ ಈ ರಸ್ತೆ ಶಾಸಕರಿಗೆ ಕಾಣುವುದಿಲ್ಲ ?
Jun 9 2024 9:03PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಮರಗಳು ಬೆಳೆದಷ್ಟು ಮನುಕುಲ ಉಳಿಯುತ್ತದೆ : DSP ಸವರಗೋಳ
Jun 9 2024 7:44PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ರಾಜ್ಯ ಸರಕಾರ ಒಪ್ಪಿದರೂ ಕೇಂದ್ರ ಸ್ಪಂದಿಸಿಲ್ಲ
Jun 9 2024 12:52PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ರಾಷ್ಟ್ರೀಯ ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ
Jun 9 2024 7:46AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಸಾವಿರಾರು ಜನರಿಗೆ ಉಚಿತ ಅಸ್ತಮಾ ಔಷಧಿ
Jun 7 2024 9:36PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ ಲೋಕಸಭೆ ಚುನಾವಣೆ ಪ್ರಚಾರ ಜೋರು : ಪಡೆದ ಮತಗಳೆಷ್ಟು ?
Jun 7 2024 9:50AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕಾಂಗ್ರೆಸ್ ವಿನ್ : ಮ್ಯಾನ್ ಆಫ್ ಮ್ಯಾಚ್ ಯಾರಿಗೆ ?

     
Copyright © 2021 Agni Divya News. All Rights Reserved.
Designed & Developed by We Make Digitize