ಕೊಪ್ಪಳ : ಥಟ್ಟನೆ ನೋಡಿದ್ರೆ ಅರೆ, ಪ್ರೀತಿಯ ಅಪ್ಪು ಅಲ್ವಾ ಅನಿಸುತ್ತೆ. ಆದರೆ ಇವರು ಅಪ್ಪು ಅಲ್ಲ. ಇವರ ಹೆಸರು ಆನಂದ್ ಆರ್ಯ. ಇವರನ್ನು ಜೂ.ಅಪ್ಪು ಎಂದೇ ಕರೆಯುತ್ತಾರೆ.
ಆನಂದ್ ಆರ್ಯ, ಮಾಲಾಶ್ರೀ , ಹರ್ಷಿಕಾ ಪೂಣಚ್ಚ ನಟನೆಯ 'ಮಾರಕಾಸ್ತ್ರ' ಸಿನಿಮಾ ಟೀಸರ್ ಸೋಮವಾರ ಕೊಪ್ಪಳದ ವಿವಿಧ ಕಾಲೇಜ್ ಹತ್ರ ಪ್ರದರ್ಶನಗೊಂಡಿತು.
ಸಿನಿಮಾ ಹೆಸರು 'ಮಾರಕಾಸ್ತ್ರ' ಆದರೂ ಇದು ಪತ್ರಕರ್ತರ ಬಗೆಗಿನ ಸಿನಿಮಾ, ಪತ್ರಕರ್ತರ ಲೇಖನಿಯ ಶಕ್ತಿ ಬಗೆಗಿನ ಸಿನಿಮಾ. ಪತ್ರಕರ್ತೆ ಪಾತ್ರದಲ್ಲಿ ಹರ್ಷಿಕಾ ಪೂಣಚ್ಚ , ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಮಾಲಾಶ್ರೀ ನಟಿಸಿದ್ದಾರೆ.
ಬಳ್ಳಾರಿ ಮೂಲದ ಗುರುಮೂರ್ತಿ ಸುನಾಮಿ ನಿರ್ದೇಶನದ ಮಾರಕಾಸ್ತ್ರ ಸಿನಿಮಾ ಸೆ. 15 ರಂದು ಬಿಡುಗಡೆ ಆಗಲಿದೆ.